ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಯದುವಂಶದ ಖಾಸಗಿ ದರ್ಬಾರ್ ಗೆ ಸಿದ್ಧತೆ ಅಂತಿಮವಾಗಿದೆ. ಇವತ್ತು ಅಮಾವಾಸ್ಯೆ ಪೂಜೆ ಮುಗಿಸಿ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾಳೆ ಬೆಳಗ್ಗೆ ಕಂಕಣ ಕಟ್ಟಿ ಕೊಳ್ಳುತ್ತಾರೆ. ನಾಳೆ 10 ಗಂಟೆಗೆ ರತ್ನಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಈ ಕುರಿತು ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಬ್ಲಿಕ್ ಟಿವಿ ಜೊತೆ ಸವಿವರವಾಗಿ ಮಾತಾಡಿದ್ದಾರೆ.
#publictv #mysurudasara2022 #yaduveer